ತ್ರಿವಿಕ್ರಮ ಪಂಡಿತ -
	ಸು. 1188. ಶಾಸನಕವಿ. ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನಲ್ಲಿ ಈತ ಬರೆದಿರುವ ಶಾಸನಗಳು ದೊರೆತಿವೆ. ಅದೇ ತಾಲ್ಲೂಕಿನ ಬಾಣಾವರ ಗ್ರಾಮದ ಬಾಣೇಶ್ವರ ದೇವಸ್ಥಾನದ ಬಳಿ ದೊರೆತ 22 ನೆಯ ಶಿಲಾಶಾಸನ (1188); ಅರಸೀಕೆರೆಯ ಸತ್ತಿನ ಕೊಡಗೆ ಹೊಲದಲ್ಲಿ ದೊರೆತ 90 ನೆಯ ಶಾಸನ (1189) ; ಅರಸೀಕೆರೆಯ ಬಸವಣ್ಣನ ದೇವಸ್ಥಾನದ ಮುಂದೆ ನೆಟ್ಟಿರುವ 93ನೆಯ ಶಾಸನಗಳನ್ನು (1189) ಈತ ಬರೆದಿದ್ದಾನೆ. ಮೊದಲ ಶಾಸನದ ಕೊನೆಯಲ್ಲಿರುವ ಈ ಪದ್ಯದಿಂದ ಈತ ಶಾಸನ ಕವಿ ಎಂಬುದಕ್ಕೆ ಸಮರ್ಥನೆ ದೊರೆಯುತ್ತದೆ.

ಬುಧನಿಧಿ ವಿವೇಕನಿಧಿ ಗುಣ |
ನಿಧಿಯಾದಿತ್ಯಾನುಜಮ ತದಂತೇವಾಸಂ |
ಬುಧನಿಧಿ ವಿವೇಕನಿಧಿ ಗುಣ |

	ನಿಧಿ ಬರೆದಂ ತ್ರಿವಿಕ್ರಮಾಂಕನೀ ಶಾಸನಮಂ |
 
ಇಷ್ಟಲ್ಲದೆ ಈತ ಸೀಗುರಿಯ ಕಾಮನ ತಮ್ಮ ಹರಿಹರಸೂರಿ (1194) ಬರೆದ ಅರಸೀಕೆರೆಯ 118ನೆಯ ಮೂಲಶಾಸನವನ್ನು ತಿದ್ದಿ ಬರೆದಿರುವಂತೆ ಈ ಶಾಸನದ ಕೊನೆಯ ಪದ್ಯಭಾಗದಿಂದ ವ್ಯಕ್ತವಾಗುತ್ತದೆ.

 	ಹರಿಹರಸೂರಿ ಸೀಗುರಿಯ ಕಾಮನ ತಮ್ಮನುಮೇಶದತ್ತ ವಾ |
	ಗ್ವಿರಚಿಸಿದಂ ತ್ರಿವಿಕ್ರಮ ಕವೀಶ್ವರನೂರ್ಜಿತ ವಾಣಿ ತಿರ್ದಿ ತಾಂ ಬರೆದಂ |
 
ಈ ಶಾಸನ ಅರಸೀಕೆರೆ ತಾಲ್ಲೂಕಿನ ಬೊಮ್ಮೆನಹಳ್ಳಿ ಗ್ರಾಮದ ಪಾಳು ದೇವಾಲಯ ಬಳಿ ದೊರೆತಿದೆ. ಅಲ್ಲದೆ, ಅರಸೀಕೆರೆಯ 38 ಮತ್ತು 39 ನೆಯ ಶಾಸನಗಳಲ್ಲಿ ತ್ರಿವಿಕ್ರಮ ಪಂಡಿತನ ಪದ್ಯಗಳು ದೊರೆಯುವುದರಿಂದ ಆ ಶಾಸನಗಳೂ ಇವನವೇ ಎಂದು ಕವಿಚರಿತೆಕಾರರು ಊಹಿಸಿದ್ದಾರೆ. ಆದರೆ ಅವುಗಳ ಅಂತ್ಯದಲ್ಲಿ ಈತನ ಹೆಸರಿಲ್ಲ.
 
ಈತ ಬರೆದಿರುವ ಮೂರೂ ಶಾಸನಗಳು ಹೊಯ್ಸಳ ದೊರೆ ಎರಡನೆಯ ಬಲ್ಲಾಳನ ಆಳ್ವಿಕೆಯಲ್ಲಿ ರಚಿತವಾದವು. 22ನೆಯ ಶಾಸನದಲ್ಲಿ, ಎರಡನೆಯ ಬಲ್ಲಾಳ ಆಳ್ವಿಕೆಯಲ್ಲಿ ಚಟ್ಟಿಸೆಟ್ಟಿ ಎಂಬಾತ ಬಾಣವೂರಿನಲ್ಲಿ ಚಟ್ಟೇಶ್ವರ ದೇವಸ್ಥಾನವನ್ನು ಕಟ್ಟಿಸಿ, ಭೂಮಿಯನ್ನು ದತ್ತಿ ಬಿಟ್ಟ ವಿಷಯವನ್ನು ಹೇಳಿದ್ದರೆ 90 ನೆಯ ಶಾಸನದಲ್ಲಿ ಅದೇ ರಾಜನ ಆಳ್ವಿಕೆಯಲ್ಲಿ ಕಾಳಗವುಂಡ ಕಟ್ಟಿಸಿದ ಮೇಳೇಶ್ವರ ದೇವಸ್ಥಾನಕ್ಕೆ ರಾಜನೂ ವರ್ತಕರೂ ಪ್ರಜೆಗಳೂ ಸೇರಿ ದತ್ತಿಯನ್ನು ಬಿಟ್ಟ ವಿಚಾರವನ್ನೂ ಅದೇ ರಾಜ ಅರಸೀಕೆರೆಯಲ್ಲಿ ಬಲ್ಲಾಳೇಶ್ವರ ದೇವಸ್ಥಾನವನ್ನು ಕಟ್ಟಿಸಿ, ಭೂಮಿಯನ್ನು ಬಿಟ್ಟ ವಿಚಾರವನ್ನೂ ಹೇಳಿದ.
 
ಈತನ ಶಾಸನಗಳು ಪ್ರೌಢಕಾವ್ಯಬಂದಕ್ಕೆ ಉದಾಹರಣೆಗಳಂತಿದ್ದು, ಅವುಗಳಲ್ಲಿ ಅಲ್ಲಲ್ಲಿ ಉತ್ತಮ ಸಾಹಿತ್ಯಗುಣವೂ ಕಂಡುಬರುತ್ತದೆ. ಉದಾಹರಣೆಗೆ ಎ¾õÉಯಂಗನನ್ನು ಬಣ್ಣಿಸುವ ಒಂದು ಪದ್ಯ ಹೀಗಿದೆ :

	ಎ¾ಗುವರಿನೃಪರ್ಗೆ ಸಿಡಿಲವೊ
	ಲೆ¾ಗುವನೆ¾ಗಿಸುವನಮಗ ರಮಣಿಯರನದೇ
	ನೆ¾ಯಂಗ ನೃಪತಿ ಗುಣಗಣ
	ದ¾õÉಯನೊಮಾಡಿದರ್ಗೆ ಮಾ¾õÀ್ಪರಿಲ್ಲೀ ಜನಗದೊಳ್
(ಕೆ.ಎಂ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ